ಭಾಗ 8 ರೇಲಿ ಬೈಸಿಕಲ್ಲು
ಸಂಜೆ
ನಾಲ್ಕಾಗಿತ್ತು. ಇತ್ತ ಒಬ್ಬನೇ ಹತ್ತಿರದ
ಗಂಡು ಮಗನಾದ ಕಾರಣ ಜನ್ನನಿಗೆ ತನ್ನ
ಮಾವನ ಕಾರ್ಯದ ಹೊಣೆಯನ್ನು ಹೊರಿಸಲಾಗಿತ್ತು. ಮಡಿಕೆ ಹಿಡಿದು ಚಿತೆಯನ್ನಟ್ಟಿಸಿ ಮನೆಯೆಡೆಗೆ ನಡೆದಿದ್ದ ಜನ್ನ. ಮಣೆ ಮುಟ್ಟಿದ್ದ ಕೂಡಲೇ
ಪುಟ್ಟ ಪೆಟ್ಟಿಗೆಯನ್ನು ಜನ್ನನ ಕೈಗಿತ್ತಿದ್ದಳು ಅವನ ತಾಯಿ.
"ಜನ್ನ,
ಅಜ್ಜ ಕಡೆ ಬಾರಿ ಬಂದಿದ್ದಾಗ
ಈ ಪೆಟ್ಟಿಗೆ ಕೊಟ್ಟಿದ್ರಪ್ಪ. ಮುಂದಿನ ವಾರ ನಾನು ಬರ್ತೀನಿ,
ಅವಾಗ ಕೊಡು. ಇಲ್ಲ ಅಂದ್ರೆ ಜನ್ನನ
ಕೈಗೆ ಸೇರಿಸಬಿಡು ಎಂದಿದ್ರು. ಈ ವಾರಕ್ಕಾಗಲೇ ಅಪ್ಪನು
ಇಲ್ಲ ಅಣ್ಣನು ಇಲ್ಲ!" ಎನ್ನುತ್ತಾ ಕಣ್ಣೇರು ಹಾಕಿದ್ದಳು.
ಆಶ್ಚರ್ಯಚಕಿತನಾಗಿ
ಪೆಟ್ಟಿಗೆ ತೆರೆದಿದ್ದ ಜನ್ನ, ಅದೇ ರೇಲಿ ಬೈಸಿಕಲ್ಲಿಗೆ
ಬಳಸಿದ್ದ ನಾಲ್ಕು ಕೀ!
No comments