ಮುನ್ನುಡಿ
ಸಂಗಮ ಮೇಕೆದಾಟು ಪ್ರವಾಸಕ್ಕಿನ್ನೂ ಯೋಗ್ಯವಾಗಿದ್ದ ಸಮಯ ಅದು. ಪ್ರವಾಸಕ್ಕೆ ಹೊರಟಿದ್ದ ಯಾವನೋ ಒಬ್ಬ ಆಸಾಮಿ, ನಮ್ಮ ಬೈಸಿಕಲ್ ಕಂಡು ನಿಲ್ಲಿಸಿ, ವ್ಯಾಪಾರಕ್ಕೆ ಕುಂತಿದ್ದ ದಿನ ನನ್ನ ಮನಃ ಪಟದಲ್ಲಿ ರೇಲಿ ಬೈಸಿಕಲ್ಲಿನ ಕಥೆಯ ಉಗಮವಾಗಿದ್ದು.
ಎಲ್ಲ ಘಟನೆಗಳಿಗೂ ಮೋಟಿವ್ ಅರ್ಥಾತ್ ಉದ್ದೇಶವಾಗಲಿ ಕಾರಣವಾಗಲಿ ಇರಲ್ಲ. ಇತಿಹಾಸದ ಎಷ್ಟೋ ಮಹತ್ತರ ಘಟನೆಗಳು ದೊಡ್ಡ ಪೆಂಗ್ವಿನಿನ (ಪೀಪಲ್ ವಿಥ್ ಪವರ್ಸ್) ಬುದ್ದಿ ಮಟ್ಟದ ಫಲಿತಾಂಶವೇ! ಅದರ ಜೊತೆಯಲ್ಲಿ ಮಾನವ ತನ್ನ ಕೋಪ, ಸಂತೋಷ, ನೋವು ಮುಂತಾದ ಭಾವನೆಗಳಿಗೆ ವ್ಯಕ್ತಿಯಾನುಸಾರ, ವಿಷಯಾನುಸಾರ ಪ್ರತ್ಯೇಕತೆ ಇಟ್ಟುಕೊಂಡಿಲ್ಲ. ಇದು ಶ್ರೇಣಿ ವ್ಯವಸ್ಥೆಯ (grading system) ಗುಣಲಕ್ಷಣ. ತುದಿಯಲ್ಲಿರುವವನು ತನ್ನೆಲ್ಲ ಹತಾಶೆ, ಕೋಪವನ್ನು ಶ್ರೇಣಿಯ ಕೆಳಗಿನವರ, ಅಸಹಾಯಕರ ಮೇಲೆ ವ್ಯಕ್ತಪಡಿಸುವುದು ಸ್ವಭಾವವಾಗಿ ಮೈಗೂಡುತ್ತ ಬಂದಿದೆ.
ದೊರೆಗೆ ಒಲಿಯದ ರಾಣಿಯ ಮೇಲಿನ ಕೋಪ, ತನ್ನ ಆಳಿಗೆ ದಂಡನೆ! ಹಿರಿಯಣ್ಣನ ಹಣಕಾಸಿನ ಹೊಡೆತ, ಸಾಕಿದ ನಾಯಿಯ ಮೇಲಿನ ಬರೆ! ಹೀಗೆ ಮನುಷ್ಯ ಇತಿಹಾಸದುದ್ದಕ್ಕೂ ತನ್ನ ಹತಾಶೆ, ಅಹಂಗಳನ್ನು ಸಿಕ್ಕ ಸಿಕ್ಕವರ ಮೇಲೆ ತೋರಿಸುತ್ತಾ ಬಂದಿದ್ದಾನೆ. ಅಂತಹ ವಿಫಲವಾದ ಭಾವನಾ ಪ್ರತ್ಯೇಕತೆಯ ಪರಿಣಾಮಗಳೇ ರೇಲಿ ಬೈಸಿಕಲ್ಲಿನ ಎಲ್ಲ ಪ್ರಶ್ನಾರ್ಥಗಳಿಗೂ ಉತ್ತರ!
No comments