ಭಾಗ 7. ಸಮಾರೋಪ | ರೇಲಿ ಬೈಸಿಕಲ್ಲು

Share:

ಭಾಗ 7 ಸಮಾರೋಪ

ಶನಿವಾರ ಸಂಜೆ ಶ್ರೀನಿವಾಸ ವೈನ್ಸ್ ನಲ್ಲಿನ ದೃಶ್ಯ.

ಶಂಕ್ರು, ರಾಮಣ್ಣನ ಹೋಟೆಲಿನಲ್ಲಿ ಅಡುಗೆ ಕೆಲಸ. ಕರಾವಳಿಯ ಮೂಲದವನಾದರೂ ಬದುಕು ಅವನನ್ನು ಘಟ್ಟ ದಾಟಿಸಿ ದಕ್ಷಿಣಕ್ಕೆ ಕರೆಸಿತ್ತು. ಊರಲ್ಲಿ ತನ್ನ ಅಕ್ಕನೊಂದಿಗೆ ಉಳಿದಿದ್ದ ಅಮ್ಮ, ೩೨ ವಯಸ್ಸಾಗಿದ್ದ ತನ್ನ ಮಗನಿಗೆ ಒತ್ತಾಯಿಸಿ 3 ತಿಂಗಳ ಹಿಂದೆಯಷ್ಟೇ ಕಂಕಣ ಕುಡಿಸಿದ್ದಳು. ಮದುವೆಯಾದ ಎರೆಡನೆ ವಾರಕ್ಕೆಯೇ ಇವನು ಗಂಡಸೇ ಅಲ್ಲವೆಂದು ಗಲಾಟೆ ಮಾಡಿಸಿ ಮಾಡುವೆ ರದ್ದು ಮಾಡುವಂತೆ ಕೇಸ್ ಹಾಕಿದ್ದಳು ಹೆಂಗಸು. ಅವಳು ಬಿಟ್ಟು ಹೋದದ್ದಕ್ಕಿಂತ ಬಿಟ್ಟ ಕರಣ ಶಂಕ್ರುವಿನ ಮೇಲೆ ಮಾನಸಿಕವಾಗಿ ಕೆಟ್ಟ ಪರಿಣಾಮ ಬೀರಿತ್ತು. ಕುಡಿತಕ್ಕೆ ವ್ಯಸನಿಯಾಗಿದ್ದ. ಮಾತಿನಲ್ಲಿ ಕ್ರೌರ್ಯ ಹೆಚ್ಚಿಸಿಕೊಂಡಿದ್ದ. ಮಾನಸಿಕವಾಗಿ ದುರ್ಬಲನಾಗಿ ಜಗತ್ತಿನ ಎಲ್ಲ ಸಣ್ಣ ಪುಟ್ಟ ಪ್ರಚೋದನೆಗೂ ಅತಿ ದುರುಳನಾಗಿ ಜವಾಬು, ಪ್ರತಿಕ್ರಿಯೆ ಕೊಡುತ್ತಿದ್ದ. ಮಧ್ಯಾಹ್ನವಷ್ಟೇ ಇದ್ದ ಕೆಲಸವೂ ಕಳೆದುಕೊಂಡು, ಕುಡಿತಕ್ಕೆ ದುಡ್ಡಿಲ್ಲದೆ ಯಾವುದೊ ಮದುವೆಗೆ ಸಹಾಯಕ್ಕೆ ಹೋಗಿ ಬಂಡ ದುಡ್ಡಿನಲ್ಲಿ ತನ್ನ ಜೀವನದ ನಿಷ್ಠುರತೆಯ ಚಿಂತನೆಯಿಂದ ತೀರ್ಥ ಸೇವನೆ ಮಾಡುತ್ತಿದ್ದ.

"ಸುಖಕ್ಕೆ ಮದ್ವೇನೋ, ನಂಟಿಗೆ/ಸಖಕ್ಕೆ ಮದ್ವೇನೋ"

ಪ್ರತಿಯೊಂದು ಪೆಗ್ಗಿಗೂ ಹಿಗ್ಗುತ್ತಿದ್ದ ಅವನ ಪ್ರಶ್ನೆಗಳು ಅವನ ಅಹಂ ಅನ್ನು ಕುಗ್ಗಿಸುತ್ತಿದ್ದವು.

"ನಾನು ಪ್ರಬಲ ಅಲ್ಲ ದುರ್ಬಲ ಅನ್ನೋದು ತಿಳಿಯೋಕೆ ಯುದ್ಧದ ಅನಿವಾರ್ಯ ಇಲ್ವಾ?" ಎನ್ನುತ್ತಾ ಲೈಂಗಿಕ ಶಿಕ್ಷಣ, ಅದನ ಕನಿಷ್ಠ ಮಾಹಿತಿಯನ್ನು ನೀಡದ ಸಮಾಜವನ್ನು ದಿಕ್ಕರಿಸುತ್ತ ಮತ್ತ್ತೊಂದು ಪೆಗ್ ಹಾಕಿದ.

ತಾನು ಎಷ್ಟೋ ಪ್ರಚೋದನಕಾರಿ ವಿಷಯಗಳ ಹಾದಿಯಲ್ಲಿ ಬಂದರು ಪ್ರತಿಕ್ರಿಯಿಸದ ಅವನ ಸ್ವಭಾವ ಅವನಿಗೆ ತಿಳಿಯದೆ ಇದ್ದ ಒಗಟಾಗಿರಲಿಲ್ಲ. ತಾಯಿಯ ಒತ್ತಾಯಕ್ಕೋ, ಅಲೈಂಗಿಕವಾಗಿದ್ದರು ಭಾವನೆ ವಿನಿಮಯದ ನಂಟಿನಿಂದ ಸುಖ ಸಿಗದ ಆಗಮನವಾಗಬಲ್ಲದೆಂಬ ಆಶಯದಿಂದಲೋ ಅಥವಾ ಮದುವೆಯ ನಂತರ ಪ್ರಯತ್ನದಲ್ಲಿ ಸಕ್ರಿಯನಾಗಿ ಎಲ್ಲ ಬದಲಾವಣೆಗೂ ಪ್ರತಿಕ್ರಿಯಿಸುವಂತಾಗಬಹುದೆಂಬ ಆಸೆಯಿಂದಲೋ ಮದುವೆಗೆ ಒಪ್ಪಿದ್ದ.

ಊರೆಲ್ಲ ಮಾತಾಡೋಹಾಗೆ ಮಾಡಿದ್ಲಲ್ಲಾ ಎಂದು ಹಲ್ಲು ಮಸೆಯುತ್ತಾನೆ.

ಮೂರೂ ವಾರದಿಂದ ತನ್ನನ್ನು ಷಂಢನೆಂದು ರೇಗಿಸುತ್ತಿದ್ದ ಮಾಡ್ದೆ ಹುಡುಗರನ್ನು ನೆನೆದು "ಸಿಗಲಿ ಸೂಳೆಮಕ್ಳು, ಚರ್ಮ ಸುಲಿತೀನಿ" ಎಂದು ಮತ್ತೊಮ್ಮೆ ಹಲ್ಲು ಕಚ್ಚಿದ್ದ.

ಜೋರಾಗಿ ಜಗಳವಾಡುವಂತಿದ್ದ ಸಂಭಾಷಣೆ ಶಂಕ್ರನ ಕಿವಿಗೆ ಬಿತ್ತು.

"ಇಂದಿರಾ ಗಾಂಧಿನ ಕೇಳಿದ್ರಂತೆ, ನೀವ್ ಬಿಟ್ರೆ ಇಂಡಿಯಾದಲ್ಲಿ ನಿಮ್ಮಷ್ಟ ಅಡ್ಮಿನಿಸ್ಟ್ರೇಷನ್ ಮಾಡಬಲ್ಲೊರ್ ಯಾರಿದ್ದಾರೆ ಅಂತ. ಅದಕ್ಕೆ ಹೆಗ್ಡೆ ಹೆಸರು ಹೇಳಿದ್ದು ಇಂದ್ರಮ್ಮ. ಹೆಗ್ಡೆ ಮುಂದೆ ಗೌಡ್ರು ಪಂಚೆ ಎಲ್ಲಿ ನಿಂತಿತ್ತು ಬಿಡು ಅಪ್ಪಾಜಿ"

"ನಮ್ಮ ಗೌಡ್ರು ಅಡ್ಮಿನಿಸ್ಟ್ರೇಷನ್ ಏನ್ ಕಮ್ಮಿಗಿಲ್ಲ ಕಣಪ್ಪ. ನಿನ್ ಒಂದೇಸಲಕ್ಕೆ ಹಿಂಗ್ ಕಂಡಂ ಮಾಡ್ಬೇಡ"

"ಲೀ ಒಕ್ಕಗಲ್ರು ೨೦ ವರ್ಷದ್ ಹಿಂದೆ ಯಾವ ಜಾತಿ ರಾಜಕೀಯ ಮಾಡಿದ್ರೂ? ಇದೆಲ್ಲ ತಂದಿದ್ ಕೀರ್ತಿ ಬಿಟ್ರೆ ಇನ್ನೇನ್ ಹೇಳೋವಂಥಡ್ ಇಲ್ಲ ಬಿಡು"

"ಹ್ಯಾಂಗ ಜಾತಿ ರಾಜಕೀಯ ಮಾಡೋದೇ ಇದ್ದಿದ್ರೆ ಇಲ್ಲಿ ರಾಯನ್ನ ಗೆಲ್ಲುಸ್ತಿದ್ರಾ? ಸಿಂಧ್ಯ ಎಷ್ತ್ಸಲ ಮಾರಾಯ ಗೆದ್ದಿರೋದು?"

ಗದ್ದಲ ಕಿರಿಕಿರಿ ಎನಿಸಿ ಬಿಲ್ ಕೊಟ್ಟು ಹೋರಾಡಲು ಎಡ್ಡಾ ಶಂಕ್ರು. ಅಷ್ಟರಲ್ಲೇ ಗಲಾಟೆಯಂತೆ ರಾಜಕೀಯ ಮಾತನಾಡುತ್ತ ಕುಂತಾವರಲ್ಲಿ ಒಬ್ಬ ಮಾತು ನಿಲ್ಲಿಸಿ ಇದೂ ಹೊರಟಿದ್ದ.

ವೈನ್ಸ್ ಬಿಲ್ ಕೊಟ್ಟು ಸ್ವಲ್ಪ ದೂರ ತೂರಾಡುತ್ತ ನಡೆಯುತ್ತಿದ್ದ ಶಂಕ್ರುವಿಗೆ ಹಿಂದಿನಿಂದ ಗಾಡಿ ಬರುವ ಸದ್ದಾಗಿ ಎಡಕ್ಕೂ ಬಲಕ್ಕೂ ಮಧ್ಯಕ್ಕೂ ತೂರಾಡಿ ನಿಂತ.

"ಲೀ ಗಾಂಡು. ಕುಡ್ದು ನನ್ನ ಗಡಿಗೆ ಬಿಡ್ಬೇಕಾ ನಿನ್ ಪ್ರಾಣ?" ಎಂದ ಬೈಕ್ ಚಾಲಕ.

ಅದನ್ನು ಕೇಳಿದ ಕೂಡಲೇ ಮೈಯಲ್ಲಿದ್ದ ರಕ್ತವೆಲ್ಲ ತಲೆಯಿಂದಾಚೆಗೆ ವೇಗವಾಗಿ ಹರಿದು, ಶಂಕ್ರುವಿಗೆ ಒತ್ತಡ ಹೆಚ್ಚಿಸಿತ್ತು. ತನ್ನನ್ನು ಷಂಢ, ಗಂಡು, ಗಂಡಸಲ್ಲ ಎನ್ನುವ ಪ್ರಪಂಚಕ್ಕೆ ಬುದ್ಧಿ ಕಳಿಸುವುದು ಅನಿವಾರ್ಯವಂತಾಗಿ ತಾನು ಮಾಡುವೆ ಅಡುಗೆ ಕೆಲಸಕ್ಕೆ ಒಯ್ದಿದ್ದ ಚಾಕು, ಈಳಿಗೆ ಮಣೆ ತೆಗೆದು ಮತ್ತಲ್ಲೇ ಹಲ್ಲೆ ನಡೆಸಿ ತನ್ನ ನಿರಾಶೆಯ ಪ್ರವ ಕರಗಿ ಹರಿಯುವವರೆಗೂ ಚಿಚ್ಚಿ ಹೊರಹಾಕಿ ಕ್ರೌರ್ಯ ಮೆರೆದಿದ್ದ.


No comments